ಗುರುವಾರ, ಮಾರ್ಚ್ 17, 2011

ಕ್ಯಾಪ್ಟನ್ ಗೋಪಿನಾಥ್ ಹತ್ತಿದ ಏಣಿ ಒದ್ದರೇ??!!

        ಸಾಮಾನ್ಯ ವರ್ಗದವರೂ ವಿಮಾನವೇರುವ ಹಾಗೆ ಮಾಡಿದ, ನಮ್ಮ ಗೊರೂರಿನವರೆ ಆದ ಕ್ಯಾಪ್ಟನ್ ಗೋಪಿನಾಥ್ ಬಗ್ಗೆ ಬಹಳ ಹೆಮ್ಮೆ ಪಡುತಿದ್ದೆ.. ಆದರೆ ವಿಶ್ವ ಕನ್ನಡ ಸಮ್ಮೇಳನದ ಕರ್ನಾಟಕ-ಜಾಗತೀಕರಣ ಸಂವಾದದಲ್ಲಿ ಅವರ ಕೆಲವು ಮಾತುಗಳು ಬೇಸರ ತರಿಸಿವೆ, " ಕೃಷಿಯಲ್ಲಿ ಭವಿಷ್ಯವಿಲ್ಲ, ನಮ್ಮ ಏಳಿಗೆಗೆ ಅವಕಾಶಗಳಿರುವುದು ನಗರ ಪ್ರದೇಶಗಳಲ್ಲಿ, ಕೃಷಿ ಇಂದ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ, ವಿದೇಶಗಳ ಹಾಗೆ ಕಡಿಮೆ ಜನ ಕೃಷಿಯಲ್ಲಿ ತೊಡಗಬೇಕು, ಹಳ್ಳಿ ಜನರು ನಗರಗಳಿಗೆ ಗುಳೆ ಹೋಗಬೇಕು" ಹೀಗೆ ಕೃಷಿಯ ಬಗ್ಗೆ discouraging ಮಾತುಗಳು ನಿಜಕ್ಕೂ ದುರದ್ರಷ್ಟುಕರ...

    ಗೋಪಿನಾಥರು ಈ ಮಟ್ಟಕ್ಕೆ ಬರಲು ಕೃಷಿಯೇ ಮುಖ್ಯ ಕಾರಣ ಎಂಬುದನ್ನು ಅವರು ಮರೆತಂತಿದೆ. ಮಿಲಿಟರಿ ಇಂದ ನಿವೃತ್ತಿಯ ನಂತರ ಗೊರೂರಿಗೆ ಬಂದ ಅವರು, ಹಾಸನ ಜಿಲ್ಲೆ ಜಾವಗಲ್ ಸಮೀಪ ಸರ್ಕಾರ ನಿವೃತ್ತ ಯೋಧರಿಗೆ ಮಂಜೂರು ಮಾಡುವ ೧೫ ಎಕರೆ ಜಮೀನು ಪಡೆದುಕೊಂಡು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದರು. ತಮಗೆ ಸರ್ಕಾರ ನೀಡಿದ ಜಮೀನಿನಲ್ಲಿ ಆಹಾರ ಬೆಳೆಗಳು, ವಾಣಿಜ್ಯ ಬೆಳೆಗಳು, ಹೈನುಗಾರಿಕೆ , ಹಸು ಸಾಕಣೆ, ಕೋಳಿ ಸಾಕಣೆ, ಮೀನು ಸಾಕಣೆ, ಹಂದಿ ಸಾಕಣೆ, ಹೀಗೆ ಹತ್ತು ಹಲವಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಯಶಸ್ವಿ ರೈತನೆನಿಸಿಕೊಂಡರು, ಅದರ ಫಲವಾಗಿ ಪ್ರತಿಷ್ಟಿಥ ವಾಚ್ ಕಂಪನಿ Rolex ನೀಡುವ , "Best Agriculturist Award" ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು, ಕೃಷಿಯಲ್ಲಿ ಮಾಡಿದ ಸಾಧನೆ ಮತ್ತು ಸಂಪಾದನೆ ಹಲವಾರು ಸಾಹಸಕ್ಕೆ ಮತ್ತು ಆಲೋಚನೆಗಳಿಗೆ ಪ್ರೇರೇಪಿಸಿತು. ಹಾಸನದಲ್ಲಿ ಮೋಟರ್ ಬೈಕ್ ಷೋ ರೂಂ, ಹೆಲಿಕಾಪ್ತೆರ್ ಖರಿದಿಸಿ ಬಾಡಿಗೆಗೆ ನೀಡುವುದು ಹೀಗೆ ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು, ಈ ಎಲ್ಲಾ ಸಾಧನೆಯ ಪರಿಣಾಮವೇ  Deccan Airways ಸಂಸ್ಥೆಯನ್ನು ಹುಟ್ಟುಹಾಕಲು ಕಾರಣವಾಯಿತು.
    ಯಶಸ್ಸಿನ ಪ್ರಯಾಣದ ಪ್ರಾರಂಭದ ದಿನಗಳಲ್ಲಿ, ತನ್ನ ಯಶಸ್ಸಿಗೆ ಕೃಷಿಯೇ ಕಾರಣವೆನ್ನುತ್ತಿದ್ದ, ರೈತರಿಗೆ , ಗ್ರಾಮೀಣ ಯುವಜನತೆಗೆ ಮಾದರಿಯಾಗಬೇಕಿದ್ದ ಒಬ್ಬ ವ್ಯಕ್ತಿ ಹೀಗೆ ಕೃಷಿಯ ಬಗ್ಗೆ ಅಸಡ್ಡೆಯ ಮಾತನಾಡಿರುವುದು ಸರಿಯಲ್ಲ.. ಇದು ಹತ್ತಿದ ಏಣಿಯನ್ನೇ ಒದ್ದಂತೆ!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ