ಗುರುವಾರ, ಮಾರ್ಚ್ 17, 2011

ಕ್ಯಾಪ್ಟನ್ ಗೋಪಿನಾಥ್ ಹತ್ತಿದ ಏಣಿ ಒದ್ದರೇ??!!

        ಸಾಮಾನ್ಯ ವರ್ಗದವರೂ ವಿಮಾನವೇರುವ ಹಾಗೆ ಮಾಡಿದ, ನಮ್ಮ ಗೊರೂರಿನವರೆ ಆದ ಕ್ಯಾಪ್ಟನ್ ಗೋಪಿನಾಥ್ ಬಗ್ಗೆ ಬಹಳ ಹೆಮ್ಮೆ ಪಡುತಿದ್ದೆ.. ಆದರೆ ವಿಶ್ವ ಕನ್ನಡ ಸಮ್ಮೇಳನದ ಕರ್ನಾಟಕ-ಜಾಗತೀಕರಣ ಸಂವಾದದಲ್ಲಿ ಅವರ ಕೆಲವು ಮಾತುಗಳು ಬೇಸರ ತರಿಸಿವೆ, " ಕೃಷಿಯಲ್ಲಿ ಭವಿಷ್ಯವಿಲ್ಲ, ನಮ್ಮ ಏಳಿಗೆಗೆ ಅವಕಾಶಗಳಿರುವುದು ನಗರ ಪ್ರದೇಶಗಳಲ್ಲಿ, ಕೃಷಿ ಇಂದ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ, ವಿದೇಶಗಳ ಹಾಗೆ ಕಡಿಮೆ ಜನ ಕೃಷಿಯಲ್ಲಿ ತೊಡಗಬೇಕು, ಹಳ್ಳಿ ಜನರು ನಗರಗಳಿಗೆ ಗುಳೆ ಹೋಗಬೇಕು" ಹೀಗೆ ಕೃಷಿಯ ಬಗ್ಗೆ discouraging ಮಾತುಗಳು ನಿಜಕ್ಕೂ ದುರದ್ರಷ್ಟುಕರ...

    ಗೋಪಿನಾಥರು ಈ ಮಟ್ಟಕ್ಕೆ ಬರಲು ಕೃಷಿಯೇ ಮುಖ್ಯ ಕಾರಣ ಎಂಬುದನ್ನು ಅವರು ಮರೆತಂತಿದೆ. ಮಿಲಿಟರಿ ಇಂದ ನಿವೃತ್ತಿಯ ನಂತರ ಗೊರೂರಿಗೆ ಬಂದ ಅವರು, ಹಾಸನ ಜಿಲ್ಲೆ ಜಾವಗಲ್ ಸಮೀಪ ಸರ್ಕಾರ ನಿವೃತ್ತ ಯೋಧರಿಗೆ ಮಂಜೂರು ಮಾಡುವ ೧೫ ಎಕರೆ ಜಮೀನು ಪಡೆದುಕೊಂಡು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದರು. ತಮಗೆ ಸರ್ಕಾರ ನೀಡಿದ ಜಮೀನಿನಲ್ಲಿ ಆಹಾರ ಬೆಳೆಗಳು, ವಾಣಿಜ್ಯ ಬೆಳೆಗಳು, ಹೈನುಗಾರಿಕೆ , ಹಸು ಸಾಕಣೆ, ಕೋಳಿ ಸಾಕಣೆ, ಮೀನು ಸಾಕಣೆ, ಹಂದಿ ಸಾಕಣೆ, ಹೀಗೆ ಹತ್ತು ಹಲವಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಯಶಸ್ವಿ ರೈತನೆನಿಸಿಕೊಂಡರು, ಅದರ ಫಲವಾಗಿ ಪ್ರತಿಷ್ಟಿಥ ವಾಚ್ ಕಂಪನಿ Rolex ನೀಡುವ , "Best Agriculturist Award" ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು, ಕೃಷಿಯಲ್ಲಿ ಮಾಡಿದ ಸಾಧನೆ ಮತ್ತು ಸಂಪಾದನೆ ಹಲವಾರು ಸಾಹಸಕ್ಕೆ ಮತ್ತು ಆಲೋಚನೆಗಳಿಗೆ ಪ್ರೇರೇಪಿಸಿತು. ಹಾಸನದಲ್ಲಿ ಮೋಟರ್ ಬೈಕ್ ಷೋ ರೂಂ, ಹೆಲಿಕಾಪ್ತೆರ್ ಖರಿದಿಸಿ ಬಾಡಿಗೆಗೆ ನೀಡುವುದು ಹೀಗೆ ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು, ಈ ಎಲ್ಲಾ ಸಾಧನೆಯ ಪರಿಣಾಮವೇ  Deccan Airways ಸಂಸ್ಥೆಯನ್ನು ಹುಟ್ಟುಹಾಕಲು ಕಾರಣವಾಯಿತು.
    ಯಶಸ್ಸಿನ ಪ್ರಯಾಣದ ಪ್ರಾರಂಭದ ದಿನಗಳಲ್ಲಿ, ತನ್ನ ಯಶಸ್ಸಿಗೆ ಕೃಷಿಯೇ ಕಾರಣವೆನ್ನುತ್ತಿದ್ದ, ರೈತರಿಗೆ , ಗ್ರಾಮೀಣ ಯುವಜನತೆಗೆ ಮಾದರಿಯಾಗಬೇಕಿದ್ದ ಒಬ್ಬ ವ್ಯಕ್ತಿ ಹೀಗೆ ಕೃಷಿಯ ಬಗ್ಗೆ ಅಸಡ್ಡೆಯ ಮಾತನಾಡಿರುವುದು ಸರಿಯಲ್ಲ.. ಇದು ಹತ್ತಿದ ಏಣಿಯನ್ನೇ ಒದ್ದಂತೆ!!!!

ಶುಕ್ರವಾರ, ಮಾರ್ಚ್ 11, 2011

ಇವು ಕವನಗಳಲ್ಲ ಮನದ ಮಾತುಗಳು

ಅರಿತು ಬಾಳು..

ಕನ್ನಡದ ಕವಲುಗಳು ನೂರು ಮುನ್ನೂರು
ಜನರಾಶಿ ಬಿಟ್ಟು ಬರುತಿದೆ ಹೊರ ರಾಜ್ಯಗಳ ಊರು ಊರು
ವಲಸಿಗನೇ ಮರೆಯದಿರು ಕರುನಾಡ ಹಿರಿಮೆ
...ಮನದಲಿರಲಿ ಕನ್ನಡ ಮಣ್ಣಿನ ಮಹಿಮೆ
ನೀನೆಂದು ಪರೀಕ್ಷಿಸದಿರು ಕನ್ನಡಿಗರ ತಾಳ್ಮೆ
ಕನ್ನಡ ಕಲಿತು ತೋರು ನಿನ್ನ ಜಾಣ್ಮೆ
ಇದನರಿತು ನೀ ಬಾಳಿದರೆ ಮರುಳೆ
ಹಸನಾಗುವುದು ನಿನ್ನ ಬಾಳೇ

------ ತೃಪ್ತಿ ಮನು


ಎಕ್ಕಡ ಎನ್ನಡ ಪರಭಾಷಿಕರ ಬಾಯಿನಲಿ
ಆದರೆ ಇವು ಕನ್ನಡಿಗರ ಕಾಲಿನಲಿ
A for Apple ಗೆ ಸ್ವಂತ ಪದವಿಲ್ಲ ಹಲ ಭಾಷೆಯಲಿ
ಒಂದು ಎರಡು ಅಂಕಿ ಬರೆಯುತ್ತಾರೆ ಆಂಗ್ಲದಲಿ
'ಹ' ತೆಗೆದು 'ಪ' ಹಾಕಿದರೆ ಹುಟ್ಟಿತೆ ಹೊಸ ಭಾಷೆ
ಸರಿಸಾಟಿ ಆದೀತೆ ನಮ್ಮ ಕನ್ನಡಕೆ...

  
 
------ ತೃಪ್ತಿ ಮನು


(ಈ ಕವನ ರಚನೆಯಾಗುವುದಕ್ಕೆ ಮೂಲ ಕಾರಣ ಕೆಲವು ವಾಸ್ತವಿಕ ಅಂಶಗಳು
ಆಂಗ್ಲ ಭಾಷೆಯ ಮೊದಲ ಪದ, ದಿನ ನಿತ್ಯವು ಬಳಸುವ ಹಣ್ಣು " ಸೇಬಿ ಗೆ " ತಮ್ಮ ಭಾಷೆಇಂದಲೇ ಬೇರೆಲ್ಲ ಭಾಷೆಗಳು ಎಂದೆನ್ನುವ ತಮಿಳಿನಲ್ಲಾಗಲಿ ಹೀಗೆ ಹಲವು ಭಾಷೆಗಳಲ್ಲಿ ಇಂಥಹ ದಿನನಿತ್ಯ ಉಪಯೋಗಿಸುವ ಸಾವಿರಾರು ಪದಗಳಿಗೆ ಅರ್ಥ ಅಥವಾ ಸರಿಸಮನಾದ ಪದ ಇಲ್ಲದೆ ಇರುವುದು.
ಭಾಷೆಗೆ ಇನ್ನೊಂದು ಮುಖ್ಯವಾಗಿ ಇರಲೇ ಬೇಕಾದ ಅಂಶವೆಂದರೆ ತನ್ನದೇ ಆದ ಅಂಕಿಗಳನ್ನು(Numbers) ಹೊಂದಿರುವುದು ಆದರೆ ತಮಿಳಿನಲ್ಲಾಗಲಿ ಹೀಗೆ ಹಲವು ಭಾಷೆಗಳಲ್ಲಿ ಇವು ಇಲ್ಲದೆ ಇರುವುದು ಹಾಗು ಅವು ಆಂಗ್ಲ ಅಂಕಿಗಳಿಗೆ ಪರಾವಲಂಬಿ ಆಗಿರುವುದು ಗಮನಾರ್ಹ.. 

  ಇಂಥಹ ವಶಿಷ್ಟ್ಯಥೆಇಂದ  ಕೂಡಿರುವ  ಕನ್ನಡ ಭಾಷೆಯ ಕುಡಿಗಳಾಗಿರುವುದು ನಮ್ಮ ಪೂರ್ವ ಜನ್ಮಾದ ಪುಣ್ಯ )


  ತಮ್ಮ ಮನಸ್ಸಿನಲ್ಲಿರುವ ಕನ್ನಡಪರ ಕಾಳಜಿಯನ್ನು ಕಾವ್ಯಗಳ ಮೂಲಕ ವ್ಯಕ್ತಪಡಿಸಿರುವ ತೃಪ್ತಿಯವರಿಗೆ ತುಂಬು ಹೃದಯದ ಧನ್ಯವಾದಗಳು

ಗುರುವಾರ, ಮಾರ್ಚ್ 10, 2011

ಕನ್ನಡಿಗರ ಒಗ್ಗಟ್ಟು ಪ್ರದರ್ಶನಗಳು, ಪರಭಾಷಿಕರ ಮೇಲೆ ಪ್ರಭಾವವೆಷ್ಟು ???!!!!

     ಕನ್ನಡದ  ಸಮ್ಮೇಳನಗಳು ಇತ್ತೀಚಿನ ದಿನಗಳಲ್ಲಿ ಬಹಳ ಯಶಸ್ಸನ್ನು ಕಾಣುತ್ತಿವೆ ಮತ್ತು ಮಹತ್ವವನ್ನು ಪಡೆಯುತ್ತಿವೆ , ಕನ್ನಡದ ಮನಸ್ಸುಗಳೆಲ್ಲ ಇಂಥಹ ಕಾರ್ಯಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಗಮನಾರ್ಹ, ಇವು ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳು, ಆದರೆ ಇವು ಕರ್ನಾಟಕಕ್ಕೆ ವಲಸೆಬಂದು ಕನ್ನಡ ಭಾಷೆ ಕಲಿಯದೇ ನೆಲೆಸಿರುವ ಪರಭಾಷಿಕರ ಮೇಲೆ ಯಾವುದೇ ಪರಿಣಾಮ ಬೀರದೆ ಇರುವುದು ದುರಾದೃಷ್ಟಕರ.
   ನಮ್ಮ ಮುಂದಿನ ಹಾದಿ ಪ್ರತಿಯೊಬ್ಬನಿಗೂ  ಕರ್ನಾಟಕದಲ್ಲಿ  ಕನ್ನಡ ಭಾಷೆ ಅನಿವಾರ್ಯವಾಗುವಂತೆ ಮಾಡುವುದು. ಇದಕ್ಕೆ ಹೋರಾಟವೇ ನಮ್ಮ ಮುಂದೆ ಇರುವ ಏಕೈಕ ಪರಿಹಾರ. ಮೊದಲನೆಯದಾಗಿ ಕರ್ನಾಟಕದಲ್ಲಿ ದೊರೆಯುವ ಪ್ರತಿ ಭಾಷೆಯ ದಿನ ಪತ್ರಿಕೆಗಳಲ್ಲಿ ಜಾಹಿರಾತಿನ ರೂಪದಲ್ಲಿ,  ಕರ್ನಾಟಕದಲ್ಲಿರುವ ಪ್ರತಿಯೊಬ್ಬನು ಕನ್ನಡ ಮಾತನಾಡುವ ಬಗ್ಗೆ ಮತ್ತು ಕರ್ನಾಟಕದ ಮೂಲ ಸಂಸ್ಕೃತಿ ಕನ್ನಡವನ್ನು ಬೆಳೆಸಲು ಸಹಕರಿಸುವಂತೆ ಮನವಿ ಮಾಡಬೇಕು, ಕನ್ನಡ ಭಾಷೆಯನ್ನು ಕಲಿತು ಮೈಗೂಡಿಸಿಕೊಳ್ಳಲು ಕಾಲಾವಕಾಶ ಕೊಡಬೇಕು, ಈ ಕಾಲಾವಕಾಶದಲ್ಲಿ ಕನ್ನಡದ ಬಗ್ಗೆ ಅಶ್ರದ್ದೆ ತೋರಿಸಿ ಕಲಿಯದೇ ಇದ್ದಲ್ಲಿ ಉಗ್ರ ಹೋರಾಟಕ್ಕೆ ನಾಂದಿಯಗುವುದೆಂದು ಕಠಿಣವಾಗಿ  ಘೋಷಿಸಿ ಪ್ರತಿಯೊಬ್ಬನಿಗೂ ಕನ್ನಡದ ಬಗ್ಗೆ  ಅರಿವು ಮೂಡುವಂತೆ ಮಾಡಬೇಕು.. ಬೀದಿ ಬೀದಿಗಳಲ್ಲಿ ಮನೆ ಮನಗಳಲ್ಲಿ ಜಾಗೃತಿ ಯಾಗಬೇಕು.. ಇದು ವೀಕೆಂಡ್ ನಲ್ಲಿ ನಡೆಯಬೇಕಾದುದು ಬಹಳ ಮುಖ್ಯ , ಶಾಪಿಂಗ್ ಮಾಲುಗಳಲ್ಲಿ, ಹೋಟೆಲುಗಳಲ್ಲಿ , ಹೀಗೆ ಜನ ಜಂಗುಳಿ ಸೇರುವ ಎಲ್ಲ ಕಡೆಯಲ್ಲೂ ಕನ್ನಡ ಚಳುವಳಿಗಾರರು ಶಾಂತ ರೀತಿಯಲ್ಲೇ ಕನ್ನಡ ಮಾತನಾಡುವ ಬಗ್ಗೆ ಮನವರಿಕೆ ಮಾಡಬೇಕು. ಈ ಹೋರಾಟ ನಮ್ಮ ರಾಜ್ಯದ ರಾಜಧಾನಿ, ಪರಭಾಷಿಕರ ಸ್ವರ್ಗ ಬೆಂಗಳೂರಿನಿಂದಲೇ   ಪ್ರಾರಂಭವಾಗಿ ರಾಜ್ಯವ್ಯಾಪಿ ಹರಡಬೇಕು...
      ಕನ್ನಡ ಉಳಿಸಿ ಕನ್ನಡ  ಬೆಳೆಸಿ
  ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಮಂಗಳವಾರ, ಮಾರ್ಚ್ 8, 2011

ಮಡಿವಾಳ ಕರ್ನಾಟಕವಲ್ಲವೇ??!!

ನನ್ನ ಹೊಸ ಗಾಡಿ ಪೂಜೆಗೆ ಪೂಜಾ ಸಮಗ್ರಿಕೊಳ್ಳಲು ಕಳೆದವಾರ ಮಡಿವಾಳ ಮಾರುಕಟ್ಟೆಯಲ್ಲಿ ಅಡ್ಡಾಡುತಿದ್ದೆ.
ಯಾವುದೇ ವ್ಯಾಪಾರಿಯನ್ನು ಕನ್ನಡದಲ್ಲಿ ಮಾತನಾಡಿಸಿದರೂ, ಬರುತಿದ್ದ ಉತ್ತರ ಮಾತ್ರ ತಮಿಳಿನಲ್ಲಿ.
ಕನ್ನಡಿಗ ವ್ಯಾಪಾರಿಗಳ ಹುಡುಕಾಟದಲ್ಲಿ ಮಾರುಕಟ್ಟೆಯ ಕೊನೆ ತಲುಪಿದೆ, ಪೋಲಿಸ್ ಸ್ಟೇಷನ್ ನ ಹತ್ತಿರ ಒಬ್ಬ ಹೂ ವ್ಯಾಪಾರಿಯೊಬ್ಬ ಕನ್ನಡದಲ್ಲಿ ವ್ಯಾಪಾರ ಮಾಡುತಿದ್ದ. ಅವನು ಆ ಮಾರುಕಟ್ಟೆಯ ಕೊನೆಯ ವ್ಯಾಪಾರೀ.
            ಮಾರುಕಟ್ಟೆಯಲ್ಲಿ ಕನ್ನಡಿಗರ absence ನ  ಬಗ್ಗೆ ಆತನನ್ನು ವಿಚಾರಿಸಿದಾಗ, ಆ ಮಾರುಕಟ್ಟೆ ತಮಿಳರಿಂದ ಪೂರ್ಣವಾಗಿ ಆಕ್ರಮಿತವಾಗಿದ್ದು, ಅಲ್ಲಿನ leaders ಎಲ್ಲರು ತಮಿಳಿನವರೆ ಆಗಿದ್ದು,ಅಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶವಿಲ್ಲ ಮತ್ತು ಅವರ ಹಣಬಲ ತೋಳ್ಬಲದ ಮುಂದೆ ಕನ್ನಡಿಗರದ್ದೇನು ನಡೆಯುವುದಿಲ್ಲವೆಂದು, ತನ್ನ ಬಳಿಗೆ ಬರುತಿದ್ದ ಕೆಲವೇ ಕೆಲವು ಗ್ರಾಹಕರ ಕಡೆ ಗಮನ ಹರಿಸಿದ. ಮತ್ತೊಂದು ಅಂಶ ಅವನು ತಿಳಿಸಿದ್ದೇನೆಂದರೆ ಅಲ್ಲಿಗೆ ಬರುವ ಹೆಚ್ಚಿನ ತರಕಾರಿ, ಹೂವು, ಹಣ್ಣು ತಮಿಳುನಾಡಿನದ್ದಾಗಿದ್ದು , ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು.
       ಮಡಿವಾಳ ಪ್ರದೇಶದಲ್ಲಿ ವಲಸೆಬಂದು ನೆಲೆಸಿರುವ ತಮಿಳರ ಅಟ್ಟಹಾಸ  ಮಾರುಕಟ್ಟೆ ಅಲ್ಲದೆ ಟೋಟಲ್ ಮಾಲ್ ನಲ್ಲಿ,ಫೋರಂನಲ್ಲೂ ಮುಂದುವರೆದಿದೆ.ಅಲ್ಲಿನ  ಬಹುತೇಕ ಉದ್ಯೋಗಿಗಳೆಲ್ಲ ತಮಿಳರೇ.
ಇಂಥ ಸಾವಿರಾರು ಕನ್ನಡದ , ಕನ್ನಡಿಗರ ವಿರುದ್ದದ ಧೋರಣೆಗೆ ಕೊನೆಯಾದರು ಎಂದು, ಕನ್ನಡಿಗರ ಉಳಿವಿಗೆ ಶ್ರಮಿಸುವವರಾರು, ಕನ್ನಡದ ಸಾರ್ವಭೌಮತ್ವ ಸ್ಥಾಪಿತವಾಗುವುದು ಯಾವಾಗ.
ಕರ್ನಾಟಕ ಉಳಿಸುವ , ಕನ್ನಡಿಗರ ಹಿತ ರಕ್ಷಣೆಯ ಮಾತನಾಡುವ ಸಂಘಟನೆಗಳೇಕೆ ಮೌನ ವಹಿಸಿವೆ , ಅವು ಜಾಣ ಕುರುಡು ಪ್ರದರ್ಶಿಸುತ್ತಿವೆಯೇ.