ಗುರುವಾರ, ಮಾರ್ಚ್ 10, 2011

ಕನ್ನಡಿಗರ ಒಗ್ಗಟ್ಟು ಪ್ರದರ್ಶನಗಳು, ಪರಭಾಷಿಕರ ಮೇಲೆ ಪ್ರಭಾವವೆಷ್ಟು ???!!!!

     ಕನ್ನಡದ  ಸಮ್ಮೇಳನಗಳು ಇತ್ತೀಚಿನ ದಿನಗಳಲ್ಲಿ ಬಹಳ ಯಶಸ್ಸನ್ನು ಕಾಣುತ್ತಿವೆ ಮತ್ತು ಮಹತ್ವವನ್ನು ಪಡೆಯುತ್ತಿವೆ , ಕನ್ನಡದ ಮನಸ್ಸುಗಳೆಲ್ಲ ಇಂಥಹ ಕಾರ್ಯಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಗಮನಾರ್ಹ, ಇವು ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳು, ಆದರೆ ಇವು ಕರ್ನಾಟಕಕ್ಕೆ ವಲಸೆಬಂದು ಕನ್ನಡ ಭಾಷೆ ಕಲಿಯದೇ ನೆಲೆಸಿರುವ ಪರಭಾಷಿಕರ ಮೇಲೆ ಯಾವುದೇ ಪರಿಣಾಮ ಬೀರದೆ ಇರುವುದು ದುರಾದೃಷ್ಟಕರ.
   ನಮ್ಮ ಮುಂದಿನ ಹಾದಿ ಪ್ರತಿಯೊಬ್ಬನಿಗೂ  ಕರ್ನಾಟಕದಲ್ಲಿ  ಕನ್ನಡ ಭಾಷೆ ಅನಿವಾರ್ಯವಾಗುವಂತೆ ಮಾಡುವುದು. ಇದಕ್ಕೆ ಹೋರಾಟವೇ ನಮ್ಮ ಮುಂದೆ ಇರುವ ಏಕೈಕ ಪರಿಹಾರ. ಮೊದಲನೆಯದಾಗಿ ಕರ್ನಾಟಕದಲ್ಲಿ ದೊರೆಯುವ ಪ್ರತಿ ಭಾಷೆಯ ದಿನ ಪತ್ರಿಕೆಗಳಲ್ಲಿ ಜಾಹಿರಾತಿನ ರೂಪದಲ್ಲಿ,  ಕರ್ನಾಟಕದಲ್ಲಿರುವ ಪ್ರತಿಯೊಬ್ಬನು ಕನ್ನಡ ಮಾತನಾಡುವ ಬಗ್ಗೆ ಮತ್ತು ಕರ್ನಾಟಕದ ಮೂಲ ಸಂಸ್ಕೃತಿ ಕನ್ನಡವನ್ನು ಬೆಳೆಸಲು ಸಹಕರಿಸುವಂತೆ ಮನವಿ ಮಾಡಬೇಕು, ಕನ್ನಡ ಭಾಷೆಯನ್ನು ಕಲಿತು ಮೈಗೂಡಿಸಿಕೊಳ್ಳಲು ಕಾಲಾವಕಾಶ ಕೊಡಬೇಕು, ಈ ಕಾಲಾವಕಾಶದಲ್ಲಿ ಕನ್ನಡದ ಬಗ್ಗೆ ಅಶ್ರದ್ದೆ ತೋರಿಸಿ ಕಲಿಯದೇ ಇದ್ದಲ್ಲಿ ಉಗ್ರ ಹೋರಾಟಕ್ಕೆ ನಾಂದಿಯಗುವುದೆಂದು ಕಠಿಣವಾಗಿ  ಘೋಷಿಸಿ ಪ್ರತಿಯೊಬ್ಬನಿಗೂ ಕನ್ನಡದ ಬಗ್ಗೆ  ಅರಿವು ಮೂಡುವಂತೆ ಮಾಡಬೇಕು.. ಬೀದಿ ಬೀದಿಗಳಲ್ಲಿ ಮನೆ ಮನಗಳಲ್ಲಿ ಜಾಗೃತಿ ಯಾಗಬೇಕು.. ಇದು ವೀಕೆಂಡ್ ನಲ್ಲಿ ನಡೆಯಬೇಕಾದುದು ಬಹಳ ಮುಖ್ಯ , ಶಾಪಿಂಗ್ ಮಾಲುಗಳಲ್ಲಿ, ಹೋಟೆಲುಗಳಲ್ಲಿ , ಹೀಗೆ ಜನ ಜಂಗುಳಿ ಸೇರುವ ಎಲ್ಲ ಕಡೆಯಲ್ಲೂ ಕನ್ನಡ ಚಳುವಳಿಗಾರರು ಶಾಂತ ರೀತಿಯಲ್ಲೇ ಕನ್ನಡ ಮಾತನಾಡುವ ಬಗ್ಗೆ ಮನವರಿಕೆ ಮಾಡಬೇಕು. ಈ ಹೋರಾಟ ನಮ್ಮ ರಾಜ್ಯದ ರಾಜಧಾನಿ, ಪರಭಾಷಿಕರ ಸ್ವರ್ಗ ಬೆಂಗಳೂರಿನಿಂದಲೇ   ಪ್ರಾರಂಭವಾಗಿ ರಾಜ್ಯವ್ಯಾಪಿ ಹರಡಬೇಕು...
      ಕನ್ನಡ ಉಳಿಸಿ ಕನ್ನಡ  ಬೆಳೆಸಿ
  ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ